Bhumi Puja performed for RVK – Udupi

Udupi, Feb 26: Sri Vidyavallabha Theertha Swamiji of Sri Kaniyooru Matha performed Bhumi Puja for Rashtrotthana Vidya Kendra – Udupi, herein Cherkadi Village of Brahmavara. This is the 16th School of Rashtrotthana Vidya Kendra CBSE School Group and start Educational Activity from 2025-26.

ಉಡುಪಿ, ಫೆಬ್ರವರಿ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯ ಶಾಲಾ ಕಟ್ಟಡಕ್ಕೆ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಬ್ರಹ್ಮಾವರದ ಗ್ರಾಮದಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲೆಗಳ ಸಮೂಹದ 16ನೇ ಶಾಲೆ ಇದಾಗಿದ್ದು, 2025-26ರಲ್ಲಿ ಶೈಕ್ಷಣಿಕ ಚಟುವಟಿಕೆಯನ್ನು ಪ್ರಾರಂಭಿಸಲಿದೆ.

ಭೂಮಿಪೂಜೆಯನ್ನು ನೆರವೇರಿಸಿದ ಸ್ವಾಮೀಜಿಯವರು ಅಪ್ಪ, ಅಮ್ಮ, ಮಕ್ಕಳ ಮಧ್ಯದಲ್ಲಿಯೂ ಭಾವನಾತ್ಮಕ ಸಂಬಂಧ ಶಿಥಿಲವಾಗುತ್ತಿದೆ. ಅದನ್ನು ಸರಿಮಾಡುವ ಕೆಲಸ ಮನೆ, ಶಾಲೆಗಳಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೋತ್ಥಾನ ಪರಿಷತ್‌, ಬೆಂಗಳೂರಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರು ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಪ್ರಯೋಗವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಪ್ರಾರಂಭಿಸಿದ್ದು, ಬಹುಮಟ್ಟಿಗೆ ಯಶಸ್ವಿಯೂ ಆಗಿದ್ದೇವೆ ಎಂದರು. ಜಿಲ್ಲೆಗೊಂದು ಶಾಲೆ ಪ್ರಾರಂಭಿಸುವ ಯೋಜನೆಯಂತೆ ಉಡುಪಿಯಲ್ಲಿ ಶಾಲೆಗೆ ಭೂಮಿಪೂಜೆ ಮಾಡಿದ್ದೇವೆ. ಇದು ಉಡುಪಿಯವರ ಬಹುಕಾಲದ ಕನಸಾಗಿದ್ದು, ಅದನ್ನು ನನಸಾಗಿಸುವ ವಿಶ್ವಾಸವನ್ನು ಸೇರಿರುವ ಅಪಾರ ಜನಸ್ತೋಮ ಮತ್ತೊಮ್ಮೆ ತುಂಬಿದೆ ಎಂದು ಹೇಳಿದರು.
ಹತ್ತರೊಟ್ಟಿಗೆ ಹನ್ನೊಂದನೇ ಶಾಲೆ ಮಾಡದೇ, ಸುತ್ತಮುತ್ತಲ ಪ್ರದೇಶಗಳ ಬೇರೆ ಶಾಲೆಗಳನ್ನೂ ಪ್ರಭಾವಿಸುವಂತಹ ಮಾದರಿ ಶಾಲೆಯನ್ನಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯನ್ನು ರೂಪಿಸುವ ನಿಶ್ಚಯ ಮಾಡಿರುವುದಾಗಿ ತಿಳಿಸಿದರು.

Scroll to Top