Udupi, Nov. 29: Rashtrotthana Vidya Kendra – Udupi, Cherkady, organized the ‘Srujanotsava’ program. Dr. Nandan Prabhu, Associate Professor at T.M.A. Pai Management Institute, Manipal, attended the event as the Chief Guest, inaugurated the program, and addressed the gathering. Explaining the special meaning of the program’s title, ‘Srujanotsava,’ he stated that God created the entire universe, and since that God resides within us, everyone possesses the quality of creation. He emphasized that the program, organized with the objective of bringing out the creativity in every student, is meaningful. He further added that education instils willpower power of knowledge and power of action in students. The process of expressing the perfection and learning within us is the power of action, or the power to create. He advised students to develop the attitude of learning by doing, in addition to learning by reading and observing. He concluded that this Srujanotsava is a wonderful platform for this purpose. Students presented demonstrations of models related to various subjects. The event also featured diverse cultural programs, including dance, drama, tabla playing, and group singing. A large number of parents attended and witnessed the creativity of the students.
ಉಡುಪಿ, ನ. 29: ರಾಷ್ಟೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ ಸೃಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲದ ಟಿ.ಎಂ.ಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಅಸೋಸಿಯೇಟ್ ಪ್ರೊಫೆಸರ್ ಡಾ.ನಂದನ್ ಪ್ರಭು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಾರ್ಯಕ್ರಮದ ಶೀರ್ಷಿಕೆಯಾದ ಸೃಜನೋತ್ಸವದ ವಿಶೇಷ ಅರ್ಥವನ್ನು ತಿಳಿಸುತ್ತಾ ಇಡೀ ಜಗತ್ತನ್ನು ದೇವರು ಸೃಜಿಸಿದ್ದಾನೆ. ಆ ದೇವರು ನಮ್ಮೊಳಗೆ ಇರುವುದರಿಂದ ಪ್ರತಿಯೊಬ್ಬರಿಗೂ ಸೃಜಿಸುವ ಗುಣವಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಸೃಜನಶೀಲತೆಯನ್ನು ಹೊರಹಾಕುವ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು. ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ತುಂಬುತ್ತದೆ. ನಮ್ಮೊಳಗೆ ಇರುವ ಪರಿಪೂರ್ಣತೆಯನ್ನು, ಕಲಿಕೆಯನ್ನು ಹೊರ ಹಾಕುವ ಪ್ರಕ್ರಿಯೆಯೇ ಕ್ರಿಯಾಶಕ್ತಿ ಅಥವಾ ಸೃಜಿಸುವ ಶಕ್ತಿ ಎಂದರು.ಓದಿ, ನೋಡಿ ಕಲಿಯುವ ಜೊತೆಗೆ ಮಾಡಿ ತಿಳಿಯುವ ಮನೋಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಈ ಸೃಜನೋತ್ಸವ ಇದಕ್ಕೆ ಒಂದು ಅದ್ಭುತ ವೇದಿಕೆಯಾಗಿದೆ ಎಂದರು. ವಿದ್ಯಾರ್ಥಿಗಳು ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಮಾದರಿಗಳ ಪ್ರಾತ್ಯಕ್ಷಿಕೆ ನೀಡಿದರು. ನೃತ್ಯ, ನಾಟಕ , ತಬಲ ವಾದನ, ಸಮೂಹ ಗಾಯನ ಹೀಗೆ ವಿವಿಧ ಸಂಸ್ಕೃತಿಗಳ ಕಾರ್ಯಕ್ರಮಗಳ ಪ್ರದರ್ಶನ ಮೂಡಿ ಬಂದವು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿ ವಿದ್ಯಾರ್ಥಿಗಳ ಸೃಜನಶೀಲತೆಗೆ ಸಾಕ್ಷಿಯಾದರು.










