Udupi, Jan. 2: The first Rashtrotsava was held herein Rashtrotthana Vidya Kendra – Udupi, Cherkady under the theme ‘Jayatu Bhataram – Our Country, Our Pride’.Presiding over the program, inaugurating and speaking, Sri Naravi Dinesh Hegde, General Secretary of Rashtrotthana Parishat, first observed a minute of silence for the departed soul of Dr. Vinay Hegde, a great leader who worked for the progress of the society, a giant in the business world, but who did not forget the qualities of the soil.Later, he thanked the parents for choosing Rashtrotthana Institute for the future of their children and introduced how Rashtrotthana Institutes are working to provide cultural education to their children. He introduced how Sadhana and Tapas, the affiliates of Rashtrotthana Parishat, are helping rural talented students, and also spoke in detail about the achievements made by the students who studied here. Later, he spoke in detail about the five transformations of social harmony, family education, environmental protection, indigenous lifestyle and civic etiquette. After the assembly program, the cultural programs titled Jayatu Bharatam – Our Country, Our Pride, not only brought back memories of our rich cultural roots but also expressed the resolve of building a great nation in a very different,innovative and magnificent way. Many members of Rashtrotthana Parishat, members of the school’s steering committee, representatives of different Rashtrotthana schools, parents and locals were present in large numbers in the program.

ಉಡುಪಿ, ಜ. 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ ʼಜಯತು ಭಾತರಂ – ನಮ್ಮ ದೇಶ, ನಮ್ಮ ಹೆಮ್ಮೆʼ ಎನ್ನುವ ವಿಷಯದಡಿಯಲ್ಲಿ ಮೊದಲ ರಾಷ್ಟ್ರೋತ್ಸವವು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಉದ್ಘಾಟಿಸಿ, ಮಾತನಾಡಿದ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾರಾವಿ ದಿನೇಶ್ ಹೆಗ್ಡೆಯವರು ಮೊದಲಿಗೆ ಸಮಾಜದ ಏಳಿಗೆಗೆ ಮಿಡಿದ ಕರುಣಾ ಸಾಗರ, ಉದ್ಯಮ ಲೋಕದ ದಿಗ್ಗಜರಾದರೂ, ಮಣ್ಣಿನ ಗುಣವನ್ನು ಮರೆಯದ ಧೀಮಂತ ನಾಯಕ ಡಾ. ವಿನಯ್ ಹೆಗ್ಡೆಯವರ ಅಗಲಿಕೆಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಗೈದು, ಅವರ ಆತ್ಮಕ್ಕೆ ಚಿರಶಾಂತಿ ಬಯಸಿದರು. ನಂತರದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ರಾಷ್ಟ್ರೋತ್ಥಾನ ಸಂಸ್ಥೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಪೋಷಕರಿಗೆ ಧನ್ಯವಾದ ತಿಳಿಸುತ್ತಾ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ರಾಷ್ಟ್ರೋತ್ಥಾನ ಸಂಸ್ಥೆಗಳು ಹೇಗೆ ಕಾರ್ಯಪ್ರವೃತ್ತವಾಗಿವೆ ಎಂದು ಪರಿಚಯಿಸಿದರು. ರಾಷ್ಟ್ರೋತ್ಥಾನ ಪರಿಷತ್ತಿನ ಅಂಗ ಸಂಸ್ಥೆಗಳಾದ ಸಾಧನ ಮತ್ತು ತಪಸ್ ಗಳು ಹೇಗೆ ಗ್ರಾಮೀಣ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಾಗುತ್ತಿವೆ ಎಂಬುದನ್ನು ಪರಿಚಯಿಸುವುದರ ಜೊತೆಗೆ, ಇಲ್ಲಿ ಓದಿದ ವಿದ್ಯಾರ್ಥಿಗಳು ಮಾಡಿದ ಸಾಧನೆಗಳನ್ನು ಸವಿಸ್ತಾರವಾಗಿ ತಿಳಿಸಿದರು. ತದನಂತರದಲ್ಲಿ ಪಂಚ ಪರಿವರ್ತನೆಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನಾ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆ ಕುರಿತು ವಿವರವಾಗಿ ತಿಳಿಸಿಕೊಟ್ಟರು.ಸಭಾ ಕಾರ್ಯಕ್ರಮದ ನಂತರ ಜಯತು ಭಾರತಂ – ನಮ್ಮ ದೇಶ, ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಶ್ರೀಮಂತ ಸಂಸ್ಕೃತಿಯ ಬೇರುಗಳ ಸ್ಮರಣೆಗೆ ಎಡೆಮಾಡುವ ಜೊತೆಗೆ ಭವ್ಯವಾದ ರಾಷ್ಟ್ರ ನಿರ್ಮಾಣದ ಸಂಕಲ್ಪವಾಗಿ ಅತ್ಯಂತ ವಿಭಿನ್ನ, ವಿನೂತನ ಹಾಗೂ ವೈಭವಪೂರ್ಣವಾಗಿ ಮೂಡಿಬಂದವು. ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಅನೇಕ ಸದಸ್ಯರು, ಶಾಲೆಯ ಸಂಚಾಲನ ಸಮಿತಿಯ ಸದಸ್ಯರು, ಬೇರೆ ಬೇರೆ ರಾಷ್ಟ್ರೋತ್ಥಾನ ಶಾಲೆಗಳ ಪ್ರತಿನಿಧಿಗಳು, ಪೋಷಕರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.