Udupi, Feb. 5: A sports festival was organized for classes 3 to 8 at Rashtrotthana Vidya Kendra – Udupi, Cherkady. International sportsperson, Dr. Shobha M.E., Associate Professor of Mathematics, Manipal Institute of Technologies, MAHE, who arrived as the chief guest for the program, watched the procession of the students and received the honours, said that sportspersons should be able to demonstrate their achievements in their actions rather than words. She expressed his appreciation for the sports achievements achieved by the school in the eight months since the school started. She said that continuous practice is necessary for sportspersons and shared his experiences of achievements in the sports field with the students. Everyone has talents and should use them in the right way and make their parents and this country proud through those talents. Along with physical health, mental health is very important for a human being, she said that sports are a good tool for physical and mental health. At the end of his speech, she expressed happiness over the construction of a spacious playground in the school. The guests inaugurated the sports meet by flagging off the 100-meter race for class 6 boys. At the beginning, group singing and group dance performances were performed by the students. In the sports meet, many individual sports competitions were organized for the students, as well as team competitions like Kabaddi, Ko Ko, and Football among the four channels. The winning students were honored with certificates and medals.
Closing Ceremony:
The closing ceremony was held at the end of the sports meet. The individual and team championship trophies were announced and distributed on this stage.

ಉಡುಪಿ, ಫೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೇರ್ಕಾಡಿಯಲ್ಲಿ 3 ರಿಂದ 8 ನೇ ತರಗತಿಗಳ ವಿಭಾಗದ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ವಿದ್ಯಾರ್ಥಿಗಳ ಪಥಸಂಚಲನ ವೀಕ್ಷಿಸಿ, ಗೌರವ ಸ್ವೀಕರಿಸಿದ ಅಂತರರಾಷ್ಟ್ರೀಯ ಕ್ರೀಡಾಪಟು, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್, MAHE, ಇದರ ಗಣಿತಶಾಸ್ತ್ರದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಶೋಭಾ ಎಂ. ಇ. ಮಾತನಾಡಿ ಕ್ರೀಡಾಪಟುಗಳು ಮಾತಿಗಿಂತ ತಮ್ಮ ಕ್ರಿಯೆಯಲ್ಲಿ ಸಾಧನೆಯನ್ನು ತೋರ್ಪಡಿಸುವಂತವರಾಗಬೇಕು ಎಂದರು. ಶಾಲೆ ಪ್ರಾರಂಭವಾಗಿ ಎಂಟು ತಿಂಗಳಲ್ಲಿ ಶಾಲೆ ಸಾಧಿಸಿದ ಕ್ರೀಡಾ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾಪಟುಗಳಿಗೆ ನಿರಂತರ ಅಭ್ಯಾಸ ಅಗತ್ಯ ಎಂದ ಅವರು ತಮ್ಮ ಕ್ರೀಡಾ ರಂಗದ ಸಾಧನೆಯ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಪ್ರತಿಯೊಬ್ಬರಿಗೂ ಪ್ರತಿಭೆಗಳಿವೆ ಅವುಗಳನ್ನು ಸೂಕ್ತ ದಾರಿಯಲ್ಲಿ ಬಳಸಿಕೊಂಡು ಆ ಪ್ರತಿಭೆಗಳ ಮೂಲಕ ತಮ್ಮ ಪೋಷಕರಿಗೆ ಮತ್ತು ಈ ದೇಶಕ್ಕೆ ಹೆಮ್ಮೆ ತರುವ ಸಾಧನೆ ಮಾಡಬೇಕು. ಮಾನವನಿಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಅತ್ಯಂತ ಮುಖ್ಯವಾದದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಒಂದು ಉತ್ತಮ ಸಾಧನ ಎಂದರು. ಮಾತಿನ ಕೊನೆಯಲ್ಲಿ ಶಾಲೆಯ ವಿಶಾಲ ಆಟದ ಮೈದಾನ ರೂಪಗೊಳಿಸಿರುವ ಕುರಿತು ಸಂತಸ ವ್ಯಕ್ತಪಡಿಸಿದರು. 6ನೇ ತರಗತಿ ಬಾಲಕರ 100 ಮೀಟರ್ ಓಟದ ಸ್ಪರ್ಧೆಗೆ ಅತಿಥಿಗಳು ಚಾಲನೆ ನೀಡುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಮೂಹ ಗಾಯನ , ಸಮೂಹ ನೃತ್ಯ ಪ್ರದರ್ಶನ ಕಾರ್ಯಕ್ರಮಗಳು ಮೂಡಿಬಂದವು. ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಗಾಗಿ ಅನೇಕ ವೈಯಕ್ತಿಕ ಆಟೋಟ ಸ್ಪರ್ಧೆಗಳನ್ನು, ನಾಲ್ಕು ವಾಹಿನಿಗಳ ಮಧ್ಯೆ ಕಬಡ್ಡಿ, ಕೋ ಕೋ, ಫುಟ್ಬಾಲ್ ಗಳಂತಹ ತಂಡದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭ:
ಕ್ರೀಡಾಕೂಟದ ಕೊನೆಯ ಭಾಗದಲ್ಲಿ ಸಮಾರೋಪ ಸಮಾರಂಭವನ್ನು ನೆರವೇರಿತು. ಈ ವೇದಿಕೆಯಲ್ಲಿ ವೈಯಕ್ತಿಕ ಮತ್ತು ತಂಡಗಳ ಚಾಂಪಿಯನ್ಶಿಪ್ ಟ್ರೋಫಿಗಳನ್ನು ಘೋಷಿಸಿ ವಿತರಿಸಲಾಯಿತು.