Udupi, Mar. 13: The Vahini closing ceremony was held at Rashtrotthana Vidya Kendra – Udupi, Cherkadi. Teacher Smt. Chitra submitted the annual report of the channel. Later, the students who held important positions in the school student parliament shared their experiences as leaders. Then all the office bearers of the school student parliament returned their degree badges and the flag of their Vahini to the Principal. The Principal Smt. Purnima S.D., who presided over the program, spoke and reviewed all the programs from the student parliament elections to the closing ceremony. She praised the work of the student parliament. A melodious patriotic group song was sung by the students.
ಉಡುಪಿ, ಮಾ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿ, ಚೆರ್ಕಾಡಿಯಲ್ಲಿ ವಾಹಿನಿ ಸಮಾರೋಪ ಸಮಾರಂಭ ಜರುಗಿತು. ಶಿಕ್ಷಕಿ ಶ್ರೀಮತಿ ಚಿತ್ರ ವಾಹಿನಿಯ ವಾರ್ಷಿಕ ವರದಿಯನ್ನು ಒಪ್ಪಿಸಿದರು. ನಂತರದಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ ನ ಪ್ರಮುಖ್ ಸ್ಥಾನ ನಿರ್ವಹಿಸಿದ ವಿದ್ಯಾರ್ಥಿಗಳು ನಾಯಕರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ತದನಂತರ ಶಾಲಾ ವಿದ್ಯಾರ್ಥಿ ಸಂಸತ್ತಿನ ಎಲ್ಲಾ ಪದಾಧಿಕಾರಿಗಳು ತಮ್ಮ ಪದವಿಯ ಬ್ಯಾಡ್ಜ್ ಮತ್ತು ತಮ್ಮ ವಾಹಿನಿಯ ಧ್ವಜವನ್ನು ಪ್ರಧಾನಾಚಾರ್ಯರಿಗೆ ಹಿಂದಿರುಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಧಾನಾಚಾರ್ಯೆ ಶ್ರೀಮತಿ ಪೂರ್ಣಿಮಾ ಎಸ್.ಡಿ. ಮಾತನಾಡಿ ವಿದ್ಯಾರ್ಥಿ ಸಂಸತ್ ಚುನಾವಣೆಯಿಂದ ಸಮಾರೋಪ ಸಮಾರಂಭದವರೆಗಿನ ಎಲ್ಲಾ ಕಾರ್ಯಕ್ರಮಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿ ಸಂಸತ್ ನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಸುಮಧುರ ಗೀತೆಯೊಂದು ಸಮೂಹ ಗಾಯನವಾಗಿ ಮೂಡಿಬಂದಿತು.






















