Udupi, Oct. 2: The birth anniversaries of the Father of the Nation, Mahatma Gandhi, and former Prime Minister of India, Lal Bahadur Shastri, were celebrated at Rashtrotthana Vidya Kendra – Udupi.

  • Smt. Chitra spoke about the lives, ideals, and contributions of Gandhiji and Lal Bahadur Shastri to the nation. She highlighted the importance of imbibing values ​​such as truth, non-violence, simplicity, honesty, discipline, and service to the country in one’s life.
  • On this occasion, a pledge-taking ceremony was conducted under the leadership of Smt. Poornima as part of ‘Swadeshi Saptaha’ (Swadeshi Week). The event aimed to foster patriotism and a ‘Swadeshi’ spirit among students and teachers by emphasising the use of indigenous goods, the promotion of domestic products, and the importance of self-reliance.
  • A Bhajan programme was performed by the teaching staff.

 

ಉಡುಪಿ, ಅ. 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು.

  • ಶ್ರೀಮತಿ ಚಿತ್ರ ಅವರು ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ, ಆದರ್ಶಗಳು ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ಮಾತನಾಡಿದರು. ಸತ್ಯ, ಅಹಿಂಸೆ, ಸರಳತೆ, ಪ್ರಾಮಾಣಿಕತೆ, ಶಿಸ್ತು ಹಾಗೂ ದೇಶಸೇವೆಯಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮಹತ್ವವನ್ನು ತಿಳಿಸಿದರು.
  • ಈ ಸಂದರ್ಭದಲ್ಲಿ ಸ್ವದೇಶಿ ಸಪ್ತಾಹದ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಶ್ರೀಮತಿ ಪೂರ್ಣಿಮಾ ನೇತೃತ್ವದಲ್ಲಿ ನೆರವೇರಿಸಲಾಯಿತು. ಸ್ವದೇಶಿ ವಸ್ತುಗಳ ಬಳಕೆ, ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ಹಾಗೂ ಸ್ವಾವಲಂಬನೆಯ ಮಹತ್ವವನ್ನು ಸಾರುವ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ರಾಷ್ಟ್ರಪ್ರೇಮ ಹಾಗೂ ಸ್ವದೇಶಿ ಮನೋಭಾವವನ್ನು ಬೆಳೆಸುವ ಸಂದೇಶವನ್ನು ನೀಡಲಾಯಿತು.
  • ಶಿಕ್ಷಕ ವೃಂದದವರಿಂದ ಭಜನಾ ಕಾರ್ಯಕ್ರಮ ನಡೆಯಿತು.